Document
Index

ಕೊರೊನಾವೈರಸ್ ನ ಪತ್ತೆ ಮತ್ತು ನಿರ್ವಹಣೆ

Updated on: May 28th, 2021

|

4 min read

Here is some important and useful information on Covid19, its prevention, treatment, post-infection care and vaccination shared by Dr. Parinitha Kaza, MBBS, MD, Specialised in Microbiology and Infectious Disease, and Dr. Harshith Rao, Academic Senior Resident (DM Pulmonary and Critical Care Medicine). This information has been compiled by ClearTax.

ಈ ಮಾರ್ಗದರ್ಶಿಯಲ್ಲಿ ಸೂಚಿಸಿರುವ ವಿಧಾನ ಹಾಗು ಔಷಧಿ ಕೇವಲ ಮಾಹಿತಿಗಾಗಿ. ಯಾವುದೇ ಕ್ರಮವನ್ನು ಅನುಸರಿಸುವ ಮುನ್ನ ತಮ್ಮ ವೈದ್ಯರನ್ನ ಸಂಪರ್ಕಿಸಿ ಹಾಗು ಸಲಹೆ ತೆಗೆದುಕೊಳ್ಳತಕ್ಕದ್ದು.

ಕೇವಲ ಲವಣಗಳ ಬದಲು ಔಷಧಿ ಹೆಸರುಗಳನ್ನು ಪಟ್ಟಿ ಮಾಡಲು ಕಾರಣವೆಂದರೆ ರೋಗಿಗಳು ಗೂಗಲ್ ಸರ್ಚಿಂಗಲ್ಲಿ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಯಾವುದೇ ಔಷಧೀಯ ಬ್ರಾಂಡ್‌ಗಳನ್ನು ಉತ್ತೇಜಿಸುವಲ್ಲಿ ನಮಗೆ ಯಾವುದೇ ಮೈತ್ರಿ/ಆಸಕ್ತಿ/ಪಟ್ಟಭದ್ರ ಉದ್ದೇಶವಿಲ್ಲ. 

ಸುರಕ್ಷಿತವಾಗಿರಿ, ನಿಮ್ಮ ಸುತ್ತಲೂ ಸುರಕ್ಷತಾ ಜಾಲ ರಚಿಸಿ, mask ಬಳಸಿ ಮತ್ತು ಲಸಿಕೆ ಪಡೆಯಿರಿ. ಲಸಿಕೆ ಹಾಕಿದ ರೋಗಿಗಳು ಅತ್ಯಂತ ಅಲ್ಪ ಮತ್ತು ಸಾಧಾರಣ ರೋಗಲಕ್ಷಣಗಳನ್ನು ನೋಡುತ್ತಿದ್ದಾರೆ ಎಂಬುದನ್ನು ದಯವಿಟ್ಟು ಗಮನಿಸಿ. ಲಸಿಕೆಗಳು ವ್ಯಕ್ತಿಯನ್ನು ರೋಗದಿಂದ ರಕ್ಷಿಸದಿರಬಹುದು ಆದರೆ ಅವರ ಜೀವ ಉಳಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಪ್ರಸ್ತುತ, ನಮ್ಮ ದೇಶದ ಆರೋಗ್ಯ ಮೂಲಸೌಕರ್ಯವು ಅವ್ಯವಸ್ಥೆಯಲ್ಲಿದೆ. ಆದ್ದರಿಂದ, ಜನರು COVID-19ನ ಮಾಹಿತಿ ಪಡೆಯುವುದು ಸರಿ. ಇದರಿಂದ ಅವರು ತೀವ್ರ  ಪ್ರಕರಣಗಳ ಪಟ್ಟಿಯನ್ನು ಸೇರದಿರಲು ಸಹಾಯ ಆಗುತ್ತದೆ.  

ಒಬ್ಬರು ಮನೆಯಲ್ಲಿಯೇ ಇದ್ದು, ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ಆರೈಕೆ ಮಾಡಬಹುದು. ಆಸ್ಪತ್ರೆಯ ಬಾಗಿಲುಗಳನ್ನು ಅವಶ್ಯ ವಿದ್ದರೆ ಮಾತ್ರ ತಟ್ಟಬೇಕೆಂದು ತಿಳಿದಿರುತ್ತದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ, ಎಚ್ಚರಿಕೆಯಿಂದ, ಚುರುಕಾಗಿ ವರ್ತಿಸುವ ಮೂಲಕ ಮತ್ತು ಸಾಮೂಹಿಕ ವ್ಯಾಕ್ಸಿನೇಷನ್ನ ಮೂಲಕ ದೇಶವನ್ನು ಮುಂದೆ ಬರಬಹುದಾದ ಮೂರನೇ COVID-19 ಅಲೆಯಿಂದ  ಪಾರುಮಾಡಬೇಕಾಗಿದೆ.

ಲಕ್ಷಣಗಳು

ಒಬ್ಬರು COVID +veವಾದಾಗ ಏನಾಗುತ್ತದೆ?

ಅತಿ ಸಾಮಾನ್ಯ ಲಕ್ಷಣಗಳು

ಅಪರೂಪವಾಗಿ ಕಂಡುಬರುವ ಲಕ್ಷಣಗಳು

ಪ್ರತ್ಯೇಕವಿರಿಸುವುದು

ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಉತ್ತಮ ಮಾರ್ಗ

ಮೇಲೆ ಉಲ್ಲೇಖಿಸಿದ ಯಾವುದೇ ರೋಗಲಕ್ಷಣಗಳು ಕಂಡುಬಂದ ಸಂದರ್ಭದಲ್ಲಿ, ಮೊದಲ ಕೆಲಸವೆಂದರೆ “ಐಸೊಲೇಟ್” ಆಗುವುದು. 

“COVID-19” (ಕೋವಿಡ್ -19) ಹೆಚ್ಚು ಸಾಂಕ್ರಾಮಿಕ ರೋಗ. ಮೊದಲನೆಯದಾಗಿ ನಿಮಗೆ ಮೇಲ್ಕೋಟ್ಟ ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ, ಕಟ್ಟುನಿಟ್ಟಾಗಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವುದು ಅಗತ್ಯ.

SpO2 (ಎಸ್ ಪಿಓ2)

Pulse Oximeter ಉಪಯೋಗಿಸಿ ನಿಮ್ಮ ಆಮ್ಲಜನಕದ ಶುದ್ಧತ್ವವನ್ನು ನಿಯತವಾಗಿ ಪರಿಶೀಲಿಸಿ.

SpO2 ಕಂಡುಹಿಡಿಯುವ ಸರಿಯಾದ ಕ್ರಮ: 

ಹಾಸಿಗೆ/ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಎಡ ತೋರು/ಮಧ್ಯದ ಬೆರಳಿನಲ್ಲಿ SpO2 ಮಾನಿಟರ್ ಇರಿಸಿ ಮತ್ತು 45 ಸೆಕೆಂಡುಗಳ ಕಾಲ ಕಾಯಿರಿ. 45ನೇ ಕ್ಷಣದಲ್ಲಿ ತೋರುವ ನಂಬರ್ ನಿಮ್ಮ SpO2 ಎಂದು ಪರಿಗಣಿಸಲಾಗುವುದು.

92 ಗಿಂತ ಕಡಿಮೆ ಇದ್ರೆ “oxygenetion”ನ (ಆಮ್ಲಜನಕೀಕರಣ) ಅಗತ್ಯವಿದೆ. ಸಾಮಾನ್ಯವಾಗಿ, Spo2 95 ಗಿಂತ ಅಧಿಕವಿರಬೇಕು

“Awake Proning” ಎಂಬ ತಂತ್ರ (ಬೋರಲು ಮಲಗುವುದು): 

SpO2 94 ಗಿಂತ ಕಡಿಮೆಯಿದ್ದರೆ, ಈ ತಂತ್ರವು ಆಮ್ಲಜನಕೀಕರಣ ಸುಧಾರಿಸಲು ನೆರವಾಗುತ್ತದೆ. 

ತಾಪಮಾನ

1. ಪಾದರಸದ ಥರ್ಮಾಮೀಟರ್ (Mercury Thermometer) ಮೂಲಕ ತಾಪಮಾನವನ್ನು ಪರಿಶೀಲಿಸಿ. 

ಡಿಜಿಟಲ್ಗಿಂತ ಇದು ತುಂಬಾ ನಿಖರವಾದ ನಂಬರ್ ನೀಡುತದೆ. ಮನುಷ್ಯನ ದೇಹದ ಸಾಮಾನ್ಯ ತಾಪಮಾನವು 97.56 F ರಿಂದ 99.6 Fರವರೆಗೆ ಇರುತ್ತದೆ. ತಾಪಮಾನಿವೇನಾದ್ರು 99.6 Fಗಿಂತ ಹೆಚ್ಚಿದ್ರೆ ಮಾತ್ರ ನಾವು ಜ್ವರವೆಂದು ಪರಿಗಣಿಸುತ್ತೇವೆ. ಸಾಮಾನ್ಯವಾಗಿ ಮನುಷ್ಯ ದೇಹದ ತಾಪಮಾನ ಸರಾಸರಿ    98.6 F ಎಂದು ನೀವು ಕೇಳಿರಬಹುದು. ಇತ್ತೀಚಿನ ವರ್ಷಗಳಲ್ಲಿ, ಇದು 97.5-99.6 F ಇರುತ್ತದೆ.

2. ತಾಪಮಾನ ಚಾರ್ಟ್ ರಚಿಸಿ. 

3. “Paracetamol” (ಪ್ಯಾರೆಸಿಟಮಾಲ್) / “Dolo” (ಡೊಲೊ) / “Crocin” (ಕ್ರೋಸಿನ್) / “Calpol” (ಕ್ಯಾಲ್ಪೋಲ್) ನಂತಹ ಔಷಧಿಗಳನ್ನು “SOS/Signs of Stress” (ಎಸ್‌ಒಎಸ್‌)ನಲ್ಲಿ ಮಾತ್ರ ತೆಗೆದುಕೊಳ್ಳಬೇಕು. ರೋಗಲಕ್ಷಣಗಳು ಇದ್ದಾಗ ಅದನ್ನು ತೆಗೆದುಕೊಳ್ಳಬೇಕೇಹೊರತು ನಿಯತವಾಗಿ ಅಲ್ಲ. ನೆನಪಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ, ಯಾವುದೇ “antipyretic” (ಆಂಟಿಪೈರೆಟಿಕ್‌) ತೆಗೆದುಕೊಳ್ಳುವಾಗ, ಎರಡು ಡೋಸ್ ಗಳ ನಡುವೆ ಕನಿಷ್ಠ 4 ಗಂಟೆಗಳ ಕಾಲಾವಧಿ ಅತೀ ಅವಶ್ಯ.

COVID-19 ಒಬ್ಬರಲ್ಲಿ ಇದಯೇ ಅಥವಾ ಇಲ್ಲವೇ ಎಂದು ಗುರುತಿಸುವುದು

4. ಮೈ-ಕೈ ನೋವಿಗೆ “Mefenamic Acid” (ಮೆಫೇನಮಿಕ್ ಆಸಿಡ್ ) ತೆಗೆದುಕೊಳ್ಳಿ. ಉದಾಹರಣೆಗೆ, “Meftal 500” (ಮೆಫ್ತಾಲ್ 500). “SOS/Signs of Stress” (ಎಸ್‌ಒಎಸ್‌)ನಲ್ಲಿ ಮಾತ್ರ ಈ ಔಷಧಿ ತೆಗೆದುಕೊಳ್ಳಬೇಕು. 

ಔಷಧಿಗಳ್ಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ! ಈ ಮಾರ್ಗದರ್ಶಿಯ ಉದ್ದೇಶವು ನಿಮಗೆ ಯಾವ ಆಯ್ಕೆಗಳಿವೆ ಎಂದು ತಿಳಿಸುವುದಾಗಿರುತ್ತದೆ. ಔಷಧಿ ತೆಗೆದುಕೊಳ್ಳುವ ಮುನ್ನ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಏಕೆಂದರೆ, ಒಬ್ಬೊಬ್ಬರ ದೇಹವು ಔಷಧಿಗಳಿಗೆ ಬೇರೆಬೇರೆ ರೀತಿ ಪ್ರತಿಕ್ರಿಯಿಸುತ್ತದೆ.  

5. “Antipyretics” (ಆಂಟಿಪೈರೆಟಿಕ್ಸ್) ತೆಗೆದುಕೊಂಡರೂ ಜ್ವರ ಇಳಿಯುತಿಲ್ಲ ಮತ್ತು ಪ್ರತಿ 4 ಗಂಟೆಗಳಿಗೊಮ್ಮೆ ಜ್ವರ ಮರಳಿ ಬರುತಿದ್ಧರೆ, ಮೇಲೆ ಕೊಟ್ಟಿರುವ ಔಷಧಿ ತೆಗೆದುಕೊಳ್ಳುವ ಬದಲು, Cold Compression\Tepid Sponging ಮಾಡಿಕೊಳ್ಳಿ ಹಾಗು ವೈದ್ಯರ ಬಳಿ ಹೋಗಬೇಕು. Cold Compression ಎಂದರೆ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಹಿಂಡಿ ದೇಹವನ್ನು ಒರೆಸಬೇಕು. 

COVID-19 ಪತ್ತೆ ಮಾಡುವ ವಿಧಾನ   

1. “RT-PCR” (ಆರ್ಟಿ-ಪಿಸಿಆರ್) ಹಾಗು ಇತರ ಪರೀಕ್ಷಾ ವಿಧಾನಗಳು ಕಡಿಮೆ ಪೂರೈಕೆಯಲ್ಲಿವೆ. ಆದರೆ ಆದಷ್ಟು ಬೇಗ ಒಂದು RT-PCR ಪರೀಕ್ಷೆ ತೆಗೆದುಕೊಳ್ಳುವುದು ಅಗತ್ಯ. 

2. RT-PCR ಪರೀಕ್ಷೆ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೆ, RAT ಅಂದರೆ Rapid Antigen  Test (ಕ್ಷಿಪ್ರ ಪ್ರತಿಜನಕ ಪರೀಕ್ಷೆ) ಮಾಡಸ್ಕೊಳ್ಳಿ. ಒಂದು ಅನಾನುಕೂಲವೇನೆಂದರೆ RAT ಪರೀಕ್ಷೆಯಲ್ಲಿ ಅತಿ ಹೆಚ್ಚು ಬಾರಿ ನಕಲಿ -ve ವರದಿ ಬರುತದೆ. ಈ ಪರೀಕ್ಷೆಯಲ್ಲಿ ಕೋವಿಡ್-19 +ve ಬಂದರೆ, “CT Scan” (ಸಿಟಿ ಸ್ಕ್ಯಾನ್) ಅಥವ “RT-PCR” ಪರೀಕ್ಷೆ ಮಾಡಿಕೊಳ್ಳುವ ಅಗತ್ಯ ವಿಲ್ಲ. ಆದರೆ ವರದಿ -ve ಬಂದರೆ, RT-PCR ಪರೀಕ್ಷೆ ಮಾಡಿಕೊಳ್ಳಿ. ಅದರಲ್ಲೂ, ವರದಿ -ve ಇದ್ದು ಜೊತೆಗೆ ರೋಗಲಕ್ಷಣಗಳಿದ್ದರೆ, ನೇರವಾಗಿ CT scan ಮಾಡಿಸಿಕೊಳ್ಳಿ.       

3. CT scan: ಇದು ಕೋವಿಡ್ ನ ನಿರ್ಣಾಯಕ ಪರೀಕ್ಷೆಯಾಗಿದೆ. ಆದರೆ ಇದು ತೀಕ್ಷ್ಣ ವಿಕಿರಣ (X-rayಯಿಂದ ಕೂಡಿದ್ದು) ಕೊನೆಯ ಉಪಾಯವಾಗಿ ಬಳಸಬೇಕು. ಎಲ್ಲಾ ಸಂದರ್ಭಗಳ್ಳಲ್ಲಿಯೂ ಬಳಸಬಾರದು.

Ground Glass opacities ಎಂಬುವುದು COVID ರೋಗನಿರ್ಣಯ ಆಗಿರುತದೆ.  (CORAD Score ರೋಗನಿರ್ಣಯ ಹಾಗು CT Severity Score ಮುನ್ನರಿವಿಗೆ ನೆರವಾಗುತ್ತದೆ). 

ಪರೀಕ್ಷೆ ಮುಗಿಯದ್ದಿದ್ದರೂ ತುರ್ತಿನಲ್ಲಿ ಮುಂದಿನ ಚಿಕಿತ್ಸೆಯನ್ನು ಪ್ರಾರಂಭಿಸಿ

1. “ZINCOVIT” (in ಿಂಕೋವಿಟ್) 1xBDx10 ದಿನಗಳ ಬಳಕೆ (ದಿನಕ್ಕೆ ಎರಡು ಬಾರಿ-12 ಗಂಟೆಗಳ ಕಾಲ) ಹಾಗು Multivitamin + Multimineralನ ಆಸರೆ. 

2. “Limcee” (ಲಿಮ್ಸಿ) -ಅಗಿಯಬಹುದಾದ vitamin C ಮಾತ್ರೆಗಳು 1xTDSX10 ದಿನಗಳ ಬಳಕೆ (ದಿನಕ್ಕೆ ಮೂರು ಬಾರಿ). 

3. ಕರ್ಪೂರ ಉಗಿ ತೆಗೆದುಕೊಳ್ಳಿ TDS ಬಳಕೆ (ದಿನಕ್ಕೆ ಮೂರು ಬಾರಿ). 

4. ಬಾಯಿ ಮುಕ್ಕಳಿಸು, ಮೇಲಾಗಿ “Betadine” (ಬೆಟಾಡಿನ್) BD ಬಳಕೆ (ದಿನಕ್ಕೆ ಎರಡು ಬಾರಿ-12 ಗಂಟೆಗಳ ಕಾಲ). 

5. ಹೆಚ್ಚಾಗಿ ನೀರು-ಪಾನೀಯ (ದ್ರವರೂಪದ ಆಹಾರ) ಸೇವಿಸಿ: 

i. ನಿಂಬೆ ರಸ 

ii. ಅರಿಶಿನ ಬೆರೆಸಿರುವ ಹಾಲು

iii. ದಾಳಿಂಬೆ ರಸ 

iv. ಮೊಸಾಂಬಿ ರಸ 

v. ನೀರು

vi. ಬಿಸಿ ಸೂಪ್

vii. ನೀರಿನಲ್ಲಿ ಮೆಂತ್ಯ ಬೀಜಗಳನ್ನು ನೆನೆ ಹಾಕಿ

viii. ಕಷಾಯ 

xi. ಎಳ ನೀರು     

6. ತಾಜಾ ತರಕಾರಿಗಳು, ಹಣ್ಣುಗಳು, ಚ್ಯವಾನ್‌ಪ್ರಶ್, ಅಶ್ವಗಂಧ, ನೆಲ್ಲಿಕಾಯಿ, ಹಾಗು ಹೆಚ್ಚಿನ ಪ್ರೋಟೀನ್ ಆಹಾರ (ಬೇಳೆ, ಪನೀರ್, ಸೋಯಾ, ಹಾಲು, ಇತರೆ ಬೀಜಗಳು) ನಿಮ್ಮ ಪೌಷ್ಟಿಕ ಆಹಾರದಲ್ಲಿ ಸೇರಿಸಿಕೊಳ್ಳಿ. 

ಮೇಲಿನ ಆಹಾರ ಮತ್ತು ದ್ರವ ಸೇವನೆಯ ಮಹತ್ವವನ್ನು ತೋರಿಸಲು ಯಾವುದೇ ಅಧ್ಯಯನವಿಲ್ಲ. ಇದು ಸಂಪೂರ್ಣವಾಗಿ ವೈಯಕ್ತಿಕ ಅನುಭವದ ಆಧಾರದ ಮೇಲೆ ನೀಡಲಾಗಿದೆ. ಅವು ಯಾವುದೇ ಅಡ್ಡಪರಿಣಾಮಗಳಿಲ್ಲದೆಯಿರುವ ಕಾರಣ ಸಾಮಾನ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

7. ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮ 

ಕೋವಿಡ್-19 +ve ಎಂದು ಧೃಡವಾದ ನಂತರ ಏನು ಮಾಡಬೇಕು?(ಔಷಧೀಕರಣ)* 

*ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯತಕ್ಕದ್ದು 

1. ಆಂಟಿಬಯೋಟಿಕ್

ಕೋವಿಡ್-19 ವೈರಲ್ ಸೋಂಕು ತಡೆಗಟ್ಟಲ್ಲು ತಾಂತ್ರಿಕವಾಗಿ ಪ್ರತಿಜೀವಕದ ಪಾತ್ರವಿಲ್ಲ. ಆದರೆ ಯಾವುದೇ ಬ್ಯಾಕ್ಟೀರಿಯಾದ ಸೂಪರ್‌ಇನ್‌ಫೆಕ್ಷನ್ನು ತಡೆಯಲು ಅದನ್ನು ತೆಗೆದುಕೊಳ್ಳಬೇಕು. 

ಉದಾಹರಣೆಗೆ, “Azithromycin” (ಅಜಿಥ್ರೊಮೈಸಿನ್) 500 mg OD x 5 ದಿನಗಳ ಬಳಕೆ (ದಿನಕ್ಕೆ ಒಂದು ಬಾರಿ), “Doxycycline” (ಡಾಕ್ಸಿಸೈಕ್ಲಿನ್) 100 mg BD x 5  ದಿನಗಳ ಬಳಕೆ (ದಿನಕ್ಕೆ ಎರಡು ಬಾರಿ). 

2. ಆಂಟಿವೈರಲ್

“Favipiravir” (ಫಾವಿಪಿರವಿರ್) ಎಂಬ ಔಷಧಿಯನ್ನು “NMPAC” (ಎನ್ಎಂಪಿಎಸಿ) ಶಿಫಾರಸು ಮಾಡಿದೆ ಮತ್ತು ಅಮೆರಿಕದಲ್ಲೂ ಇದನ್ನು ಬಳಸಲಾಗಿದೆ. 

ಫಾವಿಪಿರವಿರ್ (oral) ಔಷಧಿಯನ್ನು ಈ ಕೆಳಗಿನ ರೀತಿಯಲ್ಲಿ ತೆಗೆದುಕೊಳ್ಳಬೇಕು:

  • ಮೊದಲನೆಯ ದಿನ: ಪ್ರಮಾಣ: 1800 mg x BD (ದಿನಕ್ಕೆ ಎರಡು ಬಾರಿ) 
  • ಎರಡನೆಯ ದಿನದಿಂದ ಏಳನೆ ದಿನ: ಪ್ರಮಾಣ: 800 mg x BD (ದಿನಕ್ಕೆ ಎರಡು ಬಾರಿ)

ವೈದ್ಯರನ್ನು ಸಂಪರ್ಕಿಸಿದ ನಂತರವೇ Favipiravir ಸೇವನೆ ಮಾಡಬೇಕು. ವೈರಸ್ ಪುನರಾವರ್ತನೆಗೆ ಅಗತ್ಯವಾದ “RNA polymerase” (ಆರ್‌ಎನ್‌ಎ ಪಾಲಿಮರೇಸ್‌) ಯನ್ನು Favipiravir ಆಯುಧವಾಗಿ ತಡೆಯುತ್ತದೆ.

3. ಐವರ್ಮೆಕ್ಟಿನ್ 

Ivermectin” (ಐವರ್ಮೆಕ್ಟಿನ್) COVID-19ನ ಮೂಲತಃ ವೈರಸ್ ಆದ “SARS CoV-2” (ಸರ್ಸ್)ನನ್ನು ಪ್ರತಿರೋಧಿಸುತ್ತದೆ. 

ಇದರಿಂದ, 48 ಗಂಟೆಗಳಲ್ಲಿ ವೈರಸ್ ನ ಜೀವಕೋಶದ ರಚನೆಯಲ್ಲಿ 5,000 ಪಟ್ಟು ಕಡಿತವಾಗಿರುವುದು ಕಂಡುಬಂದಿದೆ. Ivermectinನ ಪ್ರಮಾಣ 12 mg OD x 3 ದಿನಗಳ ಬಳಕೆ (ದಿನಕ್ಕೆ ಒಂದು ಬಾರಿ). 

Ivermectin ಆಂಟಿಪ್ಯಾರಸಿಟಿಕ್ ಔಷಧಿಯಾಗಿದ್ದು ಮತ್ತು “FDA” (ಎಫ್ಡಿಎ) ಅನುಮೋದನೆ ಪಡೆದಿದ್ದರೂ, ಇದನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

4. ಕೆಮ್ಮಿಗಾಗಿ ಆಂಟಿಟ್ಯುಸ್ಸಿವ್

ಕೆಮ್ಮಿನ ಔಷಧಕ್ಕಾಗಿ (ಸಿರಪ್) “Benedryl” (ಬೆನೆಡಿರಿಲ್) ಸೇವಿಸಿ.

ರೋಗಲಕ್ಷಣವಾದ ಕೆಮ್ಮು ಪರಿಹಾರಕ್ಕಾಗಿ “Chlorpheniramine” (ಕ್ಲೋರ್ಫೆನಿರಾಮೈನ್) ಅನ್ನು ಬಳಸಲಾಗುತ್ತದೆ. ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಇದನ್ನು ತೆಗೆದುಕೊಳ್ಳಬೇಕು. 

Mucinac” (ಮ್ಯೂಸಿನಾಕ್) 600 ಪ್ರಮಾಣ 1 x BD x 7 ದಿನಗಳ ಬಳಕೆ (ದಿನಕ್ಕೆ ಎರಡು ಬಾರಿ)- ಇದು ನೀರಿನಲ್ಲಿ ಕರಗುವಂತಹ ಮಾತ್ರೆ, ಸಕ್ಕರೆ ಮುಕ್ತ ಮ್ಯೂಕೋಲಿಟಿಕ್ ಔಷಧಿಯಾಗಿರುತ್ತದೆ. ಇದು ಕಫ ತೆಳುವಾಗುವುದಕ್ಕೆ ಸಹಾಯ ಮಾಡುತ್ತದೆ ಹಾಗು ಇದರಿಂದ ಕೆಮ್ಮಲು ಕಷ್ಟವಾಗುವುದಿಲ್ಲ. ಇದು ಗಾಳಿಯ ಮಾರ್ಗವನ್ನು ತೆರವುಗೊಳಿಸುತ್ತದೆ, ಉಸಿರಾಟವನ್ನು ಸುಲಭಗೊಳಿಸುತ್ತದೆ ಮತ್ತು ಆಂಟಿ-ಆಕ್ಸಿಡೆಂಟ್ ಕ್ರಿಯೆಯನ್ನು ಸಹ ಹೊಂದಿದೆ. ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ, ಈ ಮಾತ್ರೆಯನ್ನು ನಂತರ ತೆಗೆದುಕೊಳ್ಳಬೇಕು.

5. ಅಂಟಿಕೊಗ್ಗುಲೆಂಟ್ಸ್

ರಕ್ತ ಹೆಪ್ಪುಗಟ್ಟುವಿಕೆ ಮತ್ತು COVID-19 ನಡುವಿನ ಸಂಬಂಧದ ಬಗ್ಗೆ ನಮಗೆ ತಿಳಿದಂತೆ, ಪಾರ್ಶ್ವವಾಯು (stroke) ಮತ್ತು ಹೃದಯಾಘಾತವನ್ನು ತಡೆಗಟ್ಟಲು “Aspirin” (ಆಸ್ಪಿರಿನ್)* ಅನ್ನು ಬಳಸಲಾಗುತ್ತದೆ.

*ಇದು ಹೃದಯ / ಪಾರ್ಶ್ವವಾಯು ರೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ವೈದ್ಯರ ಸರಿಯಾದ ಮಾರ್ಗದರ್ಶನದಲ್ಲಿ ನೀಡಬೇಕಾಗುತ್ತದೆ. ಕೊಮೊರ್ಬಿಡಿಟಿಗಳಿಲ್ಲದ ಅಲ್ಪದಿಂದ ಸಾಮಾನ್ಯ ಪ್ರಕರಣಗಳಲ್ಲಿ ಇದನ್ನು ಸೇವಿಸಬಾರದು.

6. “INHALED BUDESONIDE” (ಇನ್ಹೇಲೆಡ್  ಬುಡೆಸೊನೈಡ್)

Asthma (ಆಸ್ತಮಾಗೆ) ಚಿಕಿತ್ಸೆ ನೀಡಲು ಬಳಸುವ “steroids” (ಸ್ಟೀರಾಯ್ಡ್), ಅಲ್ಪ ರೋಗಲಕ್ಷಣಗಳನ್ನು ಹೊಂದಿರುವ ಕೋವಿಡ್-19 ರೋಗಿಗಳಿಗೆ ಮೊದಲೇ ನೀಡಿದರೆ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಚೇತರಿಕೆಯ ಸಮಯವನ್ನು ಕಡಿಮೆ ಮಾಡುತ್ತದೆ ಎಂದು “The Lancet Respiratory Medicine” (ದಿ ಲ್ಯಾನ್ಸೆಟ್ ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ) ಪ್ರಕಟವಾದ ಹೊಸ ಅಧ್ಯಯನವು ತಿಳಿಸಿದೆ.

Steroidನ ಕುರಿತಾದ ಕುತೂಹಲಕಾರಿ ಪ್ರಶ್ನೆಗಳು

1. ಗಂಭೀರವಾದ ಪ್ರಕರಣಗಳಲ್ಲಿ ಮಿತವಾದ ಪ್ರಮಾಣದಲ್ಲಿ steroidsಗಳು ಅತ್ಯಂತ ಪರಿಣಾಮಕಾರಿ.

2. ವೈರಸ್ ಅದರ ಪುನರಾವರ್ತನೆಯ ಹಂತದಲ್ಲಿರುವ ಕಾರಣ ಮೊದಲ 7 ದಿನಗಳವರೆಗೆ steroidಗಳನ್ನು ನೀಡುವುದನ್ನು ನಾವು ಮುಂದೂಡುತ್ತೇವೆ ಮತ್ತು steroidಗಳನ್ನು ಕೊಡುವುದರಿಂದ ವೈರಸ್ ನ ಪ್ರಮಾಣ ತುಂಬ ಹೆಚ್ಚುತ್ತದೆ. 

3. Dexamethasone” (ಡೆಕ್ಸಮೆಥಾಸೊನ್) ಮತ್ತು “Methylprednisolone” (ಮೀಥೈಲ್‌ಪ್ರೆಡ್ನಿಸೋಲೋನ್) ಎರಡನ್ನೂ ಬಳಸಲಾಗುತ್ತಿದೆ. 

ಉದಾಹರಣೆಗೆ, “Dexona/Dexacort” (ಡೆಕ್ಸೋನ/ಡೆಕ್ಸಾಕೋರ್ಟ್) ತೆಗೆದುಕೊಳ್ಳುವ ಪ್ರಮಾಣ 6mg OD x 5 ದಿನಗಳ ಸೇವನೆ (ದಿನಕ್ಕೆ ಒಂದು ಬಾರಿ) ಹಾಗು 3mg x OD x 3 ದಿನಗಳ ಸೇವನೆ (ದಿನಕ್ಕೆ ಒಂದು ಬಾರಿ) + 1.5mg OD x 3 ದಿನಗಳ ಸೇವನೆ (ದಿನಕ್ಕೆ ಒಂದು ಬಾರಿ). 

Methylprednisolone ನ ವಿಚಾರ, “Medrol” (ಮೆಡ್ರೋಲ್) ಎಂಬುವ ಮಾತ್ರೆ 16 mg BD x 5 ದಿನಗಳ ಸೇವನೆ (ದಿನಕ್ಕೆ ಎರಡು ಬಾರಿ) + 8 mg BD x 3 ದಿನಗಳ ಸೇವನೆ (ದಿನಕ್ಕೆ ಎರಡು ಬಾರಿ) + 4mg BD x 3 ದಿನಗಳ ಸೇವನೆ (ದಿನಕ್ಕೆ ಎರಡು ಬಾರಿ). 

4. Steroidಗಳ ಸೇವನೆ ಎಂದಿಗೂ ಥಟ್ಟನೆ ನಿಲ್ಲಿಸಲಾಗುವುದಿಲ್ಲ ಮತ್ತು weaning depreciation ರೀತಿಯಲ್ಲಿ ನಿಲ್ಲಿಸಬೇಕಾಗುತ್ತದೆ. 

5. Steroid ಸೇವನೆ ಬಹಳಷ್ಟು ಉಪಯೋಗ/ಹಾನಿಗಳನ್ನು ಹೊಂದಿದೆ. ಆದ್ದರಿಂದ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಇದನ್ನು ನಿರ್ವಹಿಸುವ ಅವಶ್ಯಕತೆಯಿದೆ.

6. ಮಧುಮೇಹ ರೋಗಿಗಳ್ಳಲ್ಲಿ steroidಗಳು ತುಂಬಾ ವಿಲಕ್ಷಣವಾಗಿ ವರ್ತಿಸುತ್ತವೆ. Steroids ಸಂಬಂಧಿಸಿದಂತೆ ಯಾವುದೇ ಚಿಕಿತ್ಸೆಯ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು. Steroidಗಳನ್ನೂ ಸೇವಿಸುವಾಗ ಮಧುಮೇಹ ಸಂಬಂಧಿಸಿದ ಔಷಧಿಗಳನ್ನು ಬದಲಾಯಿಸಬೇಕಾಗಬಹುದು. 

7. ಜ್ವರ ಕಡಿಮೆಯಾಗದ ಸಂದರ್ಭಗಳಲ್ಲಿ ಅಥವ “CRP” (ಸಿಆರ್‌ಪಿ) ನಿಯಂತ್ರಣಕ್ಕೆ ಬಾರದೆಯಿದ್ದರೆ ಅಥವ ಆಮ್ಲಜನಕದ ಕೊರತೆ (hypoxia) ಸಂಭವಿಸಿದರೆ, ವೈದ್ಯರೊಂದಿಗೆ ಸಮಾಲೋಚಿಸಿದ ನಂತರ steroids ನೀಡಬಹುದು. 

ತನಿಖೆಗಳು

ಏಳನೆ ದಿನ, CT scan ಮಾಡಿಸಿಕೊಳ್ಳಬೇಕು ಹಾಗು CT severity score ಪರಿಶೀಲಿಸಬೇಕು. ನಾಲ್ಕನೆ, ಏಳನೆ ಅಥವ ಹನ್ನೊಂದನೆ ದಿನದಂದು COVID profile ಮಾಡಿಸಿಕೊಳ್ಳಬೇಕು. ಇದರಲ್ಲಿ ಕೈಗೊಳ್ಳುವ ಪರೀಕ್ಷೆಗಳು ಹೀಗಿವೆ: 

(ಪುನರಾವರ್ತಿತ ಲ್ಯಾಬ್ ತನಿಖೆಗಳನ್ನು ನಿಮ್ಮ ವೈದ್ಯರ ಸಲಹೆಯಂತೆ ಮಿತವಾದ- ತೀವ್ರತರವಾದ ಪ್ರಕರಣಗಳಲ್ಲಿ ಮಾತ್ರ ಮಾಡಬೇಕಾಗಿದೆ. ಆದರಿಂದ, ಅಲ್ಪ/ ಲಕ್ಷಣರಹಿತ ಸಂದರ್ಭಗಳಲ್ಲಿ ವೈದ್ಯರು ಸೂಚಿಸದೆ ಇದ್ದರೆ ಲ್ಯಾಬ್ ಪರೀಕ್ಷೆಗಳು ಅಗತ್ಯವಿಲ್ಲ).

  1. Complete Blood Count*
  2. Albumin/Globulin/AG Ratio
  3. LDH*
  4. S. Ferritin*
  5. AST
  6. ALT
  7. Urea*
  8. Creatinine*
  9. IL6 (Semi-Specific)
  10. D-Dimer*
  11. CRP*
  12. Procalcitonin
  13. PT

ಆಸ್ಪತ್ರೆಗೆ ದಾಖಲು ಸೂಚಿಸುವ ಅಂಶಗಳು

1. < 93 SpO2 

2. Steroids/antipyretics ತೆಗೆದುಕೊಂಡರೂ ಜ್ವರ ನಿಯಂತ್ರಣಕ್ಕೆ ಬಾರದೆ ಇದ್ದರೆ

3. ಕೊಮೊರ್ಬಿಡಿಟೀಸ್  ಇದ್ದಾಗ

4. ಹದಗೆಡುತ್ತಿರುವ CT / Lab reports 

5. ಉಸಿರಾಟದ ತೊಂದರೆ

ತೀವ್ರ COVID ಪ್ರಕರಣಗಳು

1. “REMDESIVIR” (ರೆಮ್ಡೆಸಿವಿರ್)

ರೆಮ್ಡೆಸಿವಿರ್ ನ ಪರಿಣಾಮದ ಕುರಿತು ಸಾಕಷ್ಟು ಸಿದ್ಧಾಂತಗಳಿದ್ದರೂ, Radix Healthcare (ರಾಡಿಕ್ಸ್ ಹೆಲ್ತ್‌ಕೇರ್‌ನ) ಆರೋಗ್ಯ ಕಾರ್ಯಕರ್ತರು ರೆಮ್‌ಡೆಸಿವಿರ್ ಪರಿಣಾಮಕಾರಿ ಎಂದು ಹೇಳುತ್ತಾರೆ. ಯಾವುದೇ ನಿರ್ಣಾಯಕ ಪುರಾವೆಗಳಿಲ್ಲದಿದ್ದರೂ, ಆಸ್ಪತ್ರೆಯ ಪ್ರವೇಶವನ್ನು ಸೂಚಿಸಿದ ಸಂದರ್ಭಗಳಲ್ಲಿ, ರೋಗಲಕ್ಷಣ ಕಂಡುಬಂದ ಮೊದಲ 10 ದಿನಗಳಲ್ಲಿ ಅವರು ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡುತ್ತಿದ್ದಾರೆ. ಮೊದಲ ರೋಗಲಕ್ಷಣದ 10 ದಿನಗಳ ನಂತರ ರೆಮ್ಡೆಸಿವಿರ್ ಪಾತ್ರವು ಪ್ರಶ್ನಾರ್ಹವಾಗಿದೆ. ಪ್ರಮಾಣ 100 mg X 6 vials. ಮೊದಲನೆಯ ದಿನದಂದು, stat ಪ್ರಮಾಣ 200 mg ಆದರೆ, ನಂತರ 5 ದಿನಗಳ ವರೆಗೆ, ಪ್ರತಿ 24 ಗಂಟೆಗೊಮ್ಮೆ 100 mg ಸೇವಿಸಬೇಕು.   

2. IV STEROIDS (ಐವಿ ಸ್ಟೆರೊಯ್ಡ್ಸ್) 

ಹೆಚ್ಚಿನ ಸಿ ಆರ್ ಪಿ / ಹೈಪೋಕ್ಸಿಯಾ ಸಂದರ್ಭದಲ್ಲಿ ಸ್ಟೀರಾಯ್ಡ್ಗಳು ಜೀವ ರಕ್ಷಕರು ಎಂದು ಸಾಬೀತಾಗಿದೆ. Oral steroidಗಳು  ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಿಸಿ ಮತ್ತು IV steroidಗಳನ್ನು ಪ್ರಾರಂಭಿಸಬೇಕು.

3. ಬ್ರಾಡ್ ಸ್ಪೆಕ್ಟ್ರಮ್ ಆಂಟಿಬಯೋಟಿಕ್ಸ್ 

ಸೂಪರ್ ಸೋಂಕು / ದ್ವಿತೀಯ ಬ್ಯಾಕ್ಟೀರಿಯಾದ ಸೋಂಕನ್ನು ಸರಿದೂಗಿಸಲು, ಆಸ್ಪತ್ರೆಯ ಪರಿಸರದಲ್ಲಿ “monocef” (ಮೊನೊಸೆಫ್‌)ನಂತಹ IV ಪ್ರತಿಜೀವಕಗಳನ್ನು (antibiotics) ಪ್ರಾರಂಭಿಸಬಹುದು.

4. “TOCILIZUMAB” (ಟೋಸಿಲಿಜುಮಾಬ್)

ಗಂಭೀರ ಸಂದರ್ಭಗಳಲ್ಲಿ ಇದು ಅದ್ಭುತ ಔಷಧವಾಗಿದೆ. “Actemera” (ಆಕ್ಟ್‌ಮೆರಾ)ದಂತಹ ಹೆಸರುಗಳಲ್ಲಿ ಬರುತ್ತದೆ. ಇದು IL-6 ಪ್ರತಿರೋಧಕವಾಗಿದ್ದು, “Cytokinin Storm” (ಸೈಟೊಕಿನಿನ್ ಸ್ಟಾರ್ಮ್) / ಹೆಚ್ಚು ಎತ್ತರಿಸಿದ IL-6 ಮಟ್ಟಗಳಲ್ಲಿ ಸಾಕಷ್ಟು ಜೀವಗಳನ್ನು ಉಳಿಸುತ್ತದೆ ಎಂದು ಸಾಬೀತಾಗಿದೆ.

5. PLASMA THERAPY (ಪ್ಲಾಸ್ಮಾ ಥೆರಪಿ)

ಪ್ಲಾಸ್ಮಾ therapyಯ ಕುರಿತು  ತೀವ್ರವಾಗಿ ವಿವಾದಿತ ಸಿದ್ಧಾಂತಗಳಿವೆ, ಆದರೆ ರೋಗವು ತುಂಬಾ ಹೊಸದಾಗಿರುವುದರಿಂದ, ಗಂಭೀರ ರೋಗಿಗಳಿಗೆ ಪ್ರತಿಯೊಂದು ಚಿಕಿತ್ಸೆ ಪ್ರಯತ್ನಿಸಬೇಕು. ಪ್ಲಾಸ್ಮಾ ಥೆರಪಿಯನ್ನು ಹಲವಾರು ಆರೋಗ್ಯ ಕಾರ್ಯಕರ್ತರು ಅಳವಡಿಸಿಕೊಂಡಿದ್ದು, ಸಾಕಷ್ಟು ರೋಗಿಗಳಿಗೆ ಇದರಿಂದ ನೆರವು ಸಿಕ್ಕಿದೆ.

ದಯವಿಟ್ಟು mask ಧರಿಸಿ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಿ.

ಈ ಮಾಹಿತಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.

ಈ ಮಾಹಿತಿಯನ್ನು ಕನ್ನಡದಲ್ಲಿ ಡೌನ್‌ಲೋಡ್ ಮಾಡಿ


ಈ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಡೌನ್‌ಲೋಡ್ ಮಾಡಿ


ಈ ಮಾಹಿತಿಯನ್ನು ಹಿಂದಿಯಲ್ಲಿ ಡೌನ್‌ಲೋಡ್ ಮಾಡಿ

Clear offers taxation & financial solutions to individuals, businesses, organizations & chartered accountants in India. Clear serves 1.5+ Million happy customers, 20000+ CAs & tax experts & 10000+ businesses across India.

Efiling Income Tax Returns(ITR) is made easy with Clear platform. Just upload your form 16, claim your deductions and get your acknowledgment number online. You can efile income tax return on your income from salary, house property, capital gains, business & profession and income from other sources. Further you can also file TDS returns, generate Form-16, use our Tax Calculator software, claim HRA, check refund status and generate rent receipts for Income Tax Filing.

CAs, experts and businesses can get GST ready with Clear GST software & certification course. Our GST Software helps CAs, tax experts & business to manage returns & invoices in an easy manner. Our Goods & Services Tax course includes tutorial videos, guides and expert assistance to help you in mastering Goods and Services Tax. Clear can also help you in getting your business registered for Goods & Services Tax Law.

Save taxes with Clear by investing in tax saving mutual funds (ELSS) online. Our experts suggest the best funds and you can get high returns by investing directly or through SIP. Download Black by ClearTax App to file returns from your mobile phone.

Cleartax is a product by Defmacro Software Pvt. Ltd.

Company PolicyTerms of use

ISO

ISO 27001

Data Center

SSL

SSL Certified Site

128-bit encryption